ಕೇಂದ್ರ ಲೋಕ ಸೇವಾ ಆಯೋಗವು 2018ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದೆ.
ಪ್ರಾಥಮಿಕ ಹಂತದ ಪರೀಕ್ಷೆ ದಿನಾಂಕ (ಪ್ರಿಲಿಮ್ಸ್): ಜೂನ್ 3, 2018
ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ?
1. ಭಾರತೀಯ ಆಡಳಿತಾತ್ಮಕ ಸೇವೆ
2. ಭಾರತೀಯ ವಿದೇಶಾಂಗ ಸೇವೆ
3. ಭಾರತೀಯ ಪೊಲೀಸ್ ಸೇವೆ
4. ಭಾರತೀಯ ಪೋಸ್ಟ್ ಅಂಡ್ ಟೆಲಿಕಮ್ಯುನಿಕೇಷನ್ ಅಕೌಂಟ್ಸ್ ಮತ್ತು ಫೈನಾನ್ಸ್ ಸೇವೆ ಗ್ರೂಪ್ "ಎ"
5. ಭಾರತೀಯ ಆಡಿಟ್ ಮತ್ತು ಅಕೌಂಟ್ಸ್ ಸೇವೆ, ಗ್ರೂಪ್ "ಎ"
6. ಭಾರತೀಯ ಕಂದಾಯ ಸೇವೆ (ಕಸ್ಟಮ್ಸ್ ಅಂಡ್ ಸೆಂಟ್ರಲ್ ಎಕ್ಸೈಸ್), ಗ್ರೂಪ್ "ಎ"
7. ಭಾರತೀಯ ಡಿಫೆನ್ಸ್ ಅಕೌಂಟ್ಸ್ ಸೇವೆ, ಗ್ರೂಪ್ "ಎ"
8. ಭಾರತೀಯ ಕಂದಾಯ ಸೇವೆ (ಐಟಿ), ಗ್ರೂಪ್ "ಎ"
9. ಇಂಡಿಯನ್ ಆರ್ಡನನ್ಸ್ ಫ್ಯಾಕ್ಟರೀಸ್ ಸರ್ವೀಸ್, ಗ್ರೂಪ್ "ಎ"( ಅಸಿಸ್ಟಂಟ್ ವಕ್ರ್ಸ್ ಮ್ಯಾನೇಜರ್, ಅಡ್ಮಿನಿಸ್ಟ್ರೇಷನ್).
10. ಭಾರತೀಯ ಅಂಚೆ ಸೇವೆ, ಗ್ರೂಪ್ "ಎ"
11. ಇಂಡಿಯನ್ ಸಿವಿಲ್ ಅಕೌಂಟ್ಸ್ ಸರ್ವೀಸ್, ಗ್ರೂಪ್ "ಎ"
12. ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವೀಸ್, ಗ್ರೂಪ್ "ಎ"
13. ಇಂಡಿಯನ್ ರೈಲ್ವೆ ಅಕೌಂಟ್ಸ್ ಸರ್ವೀಸ್, ಗ್ರೂಪ್ "ಎ"
14. ಇಂಡಿಯನ್ ರೈಲ್ವೆ ಪರ್ಸನಲ್ ಸರ್ವೀಸ್, ಗ್ರೂಪ್ "ಎ"
15. ಪೋಸ್ಟ್ ಆಫ್ ಅಸಿಸ್ಟಂಟ್ ಸೆಕ್ಯುರಿಟಿ ಕಮಿಷನರ್ ಇನ್ ರೈಲ್ವೆ ಪ್ರೊಟೆಕ್ಷನ್ ಸರ್ವೀಸ್, ಗ್ರೂಪ್ "ಎ"
16. ಇಂಡಿಯನ್ ಡಿಫೆನ್ಸ್ ಎಸ್ಟೇಟ್ಸ್ ಸರ್ವೀಸ್, ಗ್ರೂಪ್ "ಎ"
17. ಭಾರತೀಯ ಮಾಹಿತಿ ಸೇವೆ, (ಜೂನಿಯರ್ ಗ್ರೇಡ್), ಗ್ರೂಪ್ "ಎ"
18. ಭಾರತೀಯ ವಾಣಿಜ್ಯ ಸೇವೆ, ಗ್ರೂಪ್ "ಎ"
19. ಇಂಡಿಯನ್ ಕಾರ್ಪೋರೇಟ್ ಲಾ ಸರ್ವೀಸ್, ಗ್ರೂಪ್ "ಎ"
20. ಆಮ್ರ್ಡ್ ಫೋರ್ಸಸ್ ಹೆಡ್ಕ್ವಾರ್ಟರ್ಸ್ ಸಿವಿಲ್ ಸರ್ವೀಸ್, ಗ್ರೂಪ್ "ಬಿ" (ಸೆಕ್ಷನ್ ಆಫೀಸರ್ಸ್ ಗ್ರೇಡ್)
21. ದೆಹಲಿ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ದಮನ್ ಮತ್ತು ಡಿಯು, ªಹಾಗೂ ದಾದ್ರಾ ಮತ್ತು ನಗರ್ ಹವೇಲಿ ಸಿವಿಲ್ ಸರ್ವೀಸ್, ಗ್ರೂಪ್ "ಬಿ"
22. ದೆಹಲಿ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ದಮನ್ ಮತ್ತು ಡಿಯು, ವಹಾಗೂ ದಾದ್ರಾ ಮತ್ತು ನಗರ್ ಹವೇಲಿ ಪೊಲೀಸ್ ಸರ್ವೀಸ್, ಗ್ರೂಪ್ "ಬಿ"
23. ಪುದುಚೇರಿ ನಾಗರಿಕ ಸೇವೆ, ಗ್ರೂಪ್ "ಬಿ"
24. ಪದುಚೇರಿ ಪೊಲೀಸ್ ಸೇವೆ, ಗ್ರೂಪ್ "ಬಿ"
ಒಟ್ಟು ಹುದ್ದೆಗಳ ಅಂದಾಜು ಸಂಖ್ಯೆ: 782 ( ಅಂಗವಿಕಲ ಅಭ್ಯರ್ಥಿಗಳಿಗೆ 32 ಹುದ್ದೆಗಳು)
ಪ್ರಾಥಮಿಕ ಹಂತದ ಪರೀಕ್ಷೆ ನಡೆಯಲಿರುವ ಕರ್ನಾಟಕದ ಕೇಂದ್ರಗಳು: ಬೆಂಗಳೂರು ಮತ್ತು ಮೈಸೂರು
ಮುಖ್ಯ ಪರೀಕ್ಷಾ ಕೇಂದ್ರ: ಬೆಂಗಳೂರು
ಪರೀಕ್ಷಾ ಹಂತಗಳು
1. ಪ್ರಾಥಮಿಕ ಹಂತದ, ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ಪರೀಕ್ಷೆ
2. ಪ್ರಾಥಮಿಕ ಹಂತದ ಪರೀಕ್ಷೆ ತೇರ್ಗಡೆಯಾದವರಿಗೆ ಮುಖ್ಯ ಹಂತದ ಪರೀಕ್ಷೆ. ಅದರಲ್ಲೂ ತೇರ್ಗಡೆ ಆದವರಿಗೆ ಸಂದರ್ಶನ.
ಅರ್ಹತೆ
ರಾಷ್ಟ್ರೀಯತೆ: ಭಾರತೀಯ ಪ್ರಜೆಯಾಗಿರಬೇಕು ಅಥವಾ, ನೇಪಾಳ, ಭೂತಾನ್, 1962ಕ್ಕಿಂತ ಮೊದಲು ಭಾರತಕ್ಕೆ ಬಂದು ನೆಲೆಸಿದ ಟಿಬೆಟಿಯನ್ ನಿರಾಶ್ರಿತರು, ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ಕೀನ್ಯಾ, ಉಗಾಂಡ, ತಾಂಜೇನಿಯಾ ಗಣರಾಜ್ಯ, ಜಾಂಬಿಯಾ, ಮಾಲವಿ, ಜೈರ್, ಇಥಿಯೋಪಿಯಾ, ವಿಯೆಟ್ನಾಂಗಳಲ್ಲಿ ನೆಲೆಸಿರುವ ಭಾರತೀಯ ಮೂಲದವರು.
ವಯೋಮಿತಿ: 21-32 ವರ್ಷ. (ಆಗಸ್ಟ್ 2, 1986ಕ್ಕಿಂತ ಮೊದಲು ಜನಿಸಿರಬಾರದು, ಆಗಸ್ಟ್ 1, 1997ರ ನಂತರ ಜನಿಸಿರಬಾರದು.
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
ಕನಿಷ್ಠ ವಿದ್ಯಾರ್ಹತೆ: ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು.
ಪ್ರಯತ್ನಗಳ ಸಂಖ್ಯೆ: 6
ಪರೀಕ್ಷಾ ಶುಲ್ಕ: 100 ರೂಪಾಯಿ. ಎಸ್ಸಿ, ಎಸ್ಟಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸಲು: http://www.upsconline.nic.in ಗೆ ಭೇಟಿ ಮಾಡಿ.
ಅರ್ಜಿ ಸಲ್ಲಿಸಲು ಕೊನೆ ದಿನ: ಮಾರ್ಚ್ 6, 2018

No comments:
Post a Comment