Thursday, June 14, 2018

ಬ್ಯಾಂಕ್‍ ಆಫ್‍ ಬರೋಡದಲ್ಲಿ 600 ಪ್ರೊಬೇಷನರಿ ಆಫೀಸರ್‍ ಹುದ್ದೆಗಳು


ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ ಆಫ್‍ ಬರೋಡ, ಬರೋಡ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ನಡೆಸುವ ಪೋಸ್ಟ್‍ ಗ್ರ್ಯಾಜುಯೇಟ್‍ ಸರ್ಟಿಫಿಕೇಟ್‍ ಇನ್‍ ಬ್ಯಾಂಕಿಂಗ್ ಅಂಡ್ ಫೈನಾನ್ಸ್‍ ಮೂಲಕ 600 ಪ್ರೊಬೇಷನರಿ ಆಫೀಸರ್‍ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.

ಕೋರ್ಸ್‍: ಪೋಸ್ಟ್‍ ಗ್ರ್ಯಾಜುಯೇಟ್‍ ಸರ್ಟಿಫಿಕೇಟ್‍ ಇನ್‍ ಬ್ಯಾಂಕಿಂಗ್ ಅಂಡ್ ಫೈನಾನ್ಸ್‍

ಅವಧಿ: 9 ತಿಂಗಳು

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಲಯದಿಂದ ಕನಿಷ್ಠ ಶೇಕಡ 55ರಷ್ಟು ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ  ಪಡೆದಿರಬೇಕು. ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳು ಶೇಕಡ 50ರಷ್ಟು ಅಂಕಗಳನ್ನು ಪಡೆದಿರಬೇಕು.

ಹುದ್ದೆಗಳ ವರ್ಗೀಕರಣ

ಎಸ್‍ಸಿ – 90, ಎಸ್‍ಟಿ – 45, ಒಬಿಸಿ – 162 ಮತ್ತು ಸಾಮಾನ್ಯ – 303.

ಒಟ್ಟು ಹುದ್ದೆಗಳು: 600

ವಯೋಮಿತಿ: 20-28 ವರ್ಷ.

ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ

ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ (ಎಸ್‍ಸಿ/ಎಸ್‍ಟಿ – 15 ವರ್ಷ, ಒಬಿಸಿ – 13 ವರ್ಷ ಮತ್ತು ಸಾಮಾನ್ಯ – 10 ವರ್ಷ) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ನೇಮಕಾತಿ ವಿಧಾನ

ಆನ್‍ಲೈನ್‍ ಪರೀಕ್ಷೆ, ಗಂಪು ಚರ್ಚೆ ಮತ್ತು ಸಂದರ್ಶನ.

ಅರ್ಜಿ ಶುಲ್ಕ

ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 100 ರೂಪಾಯಿ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 600 ರೂಪಾಯಿ

ಆನ್‍ಲೈನ್‍ ಅರ್ಜಿ ಸಲ್ಲಿಸಲು ಪ್ರಾರಂಭ: ಜೂನ್‍ 12, 2018

ಅರ್ಜಿ ಸಲ್ಲಿಸಲು ಕೊನೆ ದಿನ: ಜುಲೈ 2, 2018

ಶುಲ್ಕ ಪಾವತಿಗೆ ಕೊನೆ ದಿನ: ಜುಲೈ 2, 2018

ಆನ್‍ಲೈನ್‍ ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ: ಜುಲೈ 28, 2018.

ಹೆಚ್ಚಿನ ಮಾಹಿತಿಗೆ https://www.bankofbaroda.co.in ಗೆ ಭೇಟಿ ಕೊಡಿ.


Wednesday, June 13, 2018

ಕೊನೆಗೂ ಸಿಟಿಇಟಿ-2018ರ ಅಧಿಸೂಚನೆ ಹೊರಡಿಸಿದ ಸಿಬಿಎಸ್‍ಇ



ಡಿ.ಇಡಿ ಮತ್ತು ಬಿ.ಇಡಿ ಪೂರೈಸಿಕೊಂಡು ಶಿಕ್ಷಕರಾಗಬೇಕೆಂಬ ಕನಸು ಹೊತ್ತಿರುವವರಿಗೆ ಆಯಾ ರಾಜ್ಯ ಸರ್ಕಾರಗಳು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತೀರ್ಣರಾಗಬೇಕೆಂಬ ನಿಯಮವಿದೆ. ರಾಜ್ಯ ಸರ್ಕಾರಗಳು ಪ್ರತಿ ವರ್ಷ ಟಿಇಟಿ ನಡೆಸಬೇಕೆಂಬ ನಿಯಮವಿದ್ದರೂ ಅದರ ಪಾಲನೆಯಾಗುತ್ತಿಲ್ಲ. ರಾಜ್ಯ ಸರ್ಕಾರ ಟಿಇಟಿ ನಡೆಸಿ ಎರಡು ವರ್ಷಗಳೆ ಆಗುತ್ತಾ ಬಂದಿದೆ.

ಇನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಟಿಬೆಟಿಯನ್‍ ಶಾಲೆಗಳನ್ನು ಒಳಗೊಂಡು ಇನ್ನಿತರ ಶಾಲೆಗಳಲ್ಲಿ 1ರಿಂದ 8ನೇ ತರಗತಿ ಶಿಕ್ಷಕರಾಗಿ ನೇಮಕವಾಗಲು ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ) ಉತ್ತೀರ್ಣರಾಗಿರುವುದು ಕಡ್ಡಾಯ. ಈ ಮೊದಲು ಸಿಟಿಇಟಿ ಸಂಸ್ಥೆ ನಡೆಸುತ್ತಿದ್ದ ಪರೀಕ್ಷೆಯನ್ನು ಇದೇ ಮೊದಲ ಬಾರಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‍ಇ) ನಡೆಸುತ್ತಿದೆ. ಆ ಕುರಿತು ಈಚೆಗೆ ಅಧಿಸೂಚನೆ ಹೊರಡಿಸಿದ್ದ ಸಿಬಿಎಸ್‍ಇ, ಜೂನ್‍ 12ರಂದು ಸಿಟಿಇಟಿ-2018ರ ಪರೀಕ್ಷೆ ಕುರಿತ ಸಮಗ್ರ ವಿವರಗಳನ್ನು ಪ್ರಕಟಿಸಿದೆ.

ಪರೀಕ್ಷೆ: ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)

ಏಕೆ ಬೇಕು ಈ ಪರೀಕ್ಷೆ: ಕೇಂದ್ರ ಸರ್ಕಾರದ ಅಧೀನದ ಶಾಲೆಗಳಲ್ಲಿ 1ರಿಂದ 5 ಮತ್ತು 6-8ನೇ ತರಗತಿ ಶಿಕ್ಷಕರಾಗಿ ನೇಮಕವಾಗಲು ಸಿಟಿಇಟಿ ತೇರ್ಗಡೆ ಕಡ್ಡಾಯ.

ಪರೀಕ್ಷಾ ವಿಧಾನ

ಪತ್ರಿಕೆ 1: 1ರಿಂದ 5ನೇ ತರಗತಿ ಶಿಕ್ಷಕರಾಗಿ ನೇಮಕವಾಗಲು ಸಿಟಿಇಟಿಯ ಪತ್ರಿಕೆ-1ನ್ನು ತೇರ್ಗಡೆ ಆಗಬೇಕು.

ಪತ್ರಿಕೆ-2: 6ರಿಂದ 8ನೇ ತರಗತಿ ಶಿಕ್ಷಕರಾಗಿ ನೇಮಕವಾಗಲು ಸಿಟಿಇಟಿ ಪತ್ರಿಕೆ-2ನ್ನು ತೇರ್ಗಡೆಯಾಗಬೇಕು.

ಪರೀಕ್ಷಾ ದಿನಾಂಕ

ಪತ್ರಿಕೆ-1: ಸೆಪ್ಟೆಂಬರ್‍ 16, 2018. ಮಧ್ಯಾಹ್ನ 2ರಿಂದ 4.30ರವರೆಗೆ.
ಪತ್ರಿಕೆ-2: ಸೆಪ್ಟೆಂಬರ್‍ 16, 2018. ಬೆಳಿಗ್ಗೆ 9.30ರಿಂದ 12ರವರೆಗೆ.

ವಿದ್ಯಾರ್ಹತೆ

1ರಿಂದ 5ನೇ ತರಗತಿ ಶಿಕ್ಷಕರಾಗಲು ಬರೆಯುವ ಪತ್ರಿಕೆ-1ಕ್ಕೆ,

ಕನಿಷ್ಠ ಶೇಕಡ 50ರಷ್ಟು ಅಂಕಗಳೊಂದಿಗೆ  ದ್ವಿತೀಯ ಪಿಯು ಉತ್ತೀರ್ಣ ಮತ್ತು ಎರಡು ವರ್ಷ ಅವಧಿಯ ಡಿಪ್ಲೊಮಾ ಇನ್‍ ಎಜುಕೇಷನ್‍ ತೇರ್ಗಡೆಯಾಗಿರಬೇಕು.
ಅಥವಾ

ಕನಿಷ್ಠ ಶೇಕಡ 45ರಷ್ಟು ಅಂಕಗಳೊಂದಿಗೆ ದ್ವಿತೀಯ ಪಿಯು ಉತ್ತೀರ್ಣ ಮತ್ತು ಡಿಪ್ಲೊಮಾ ಇನ್‍ ಎಲಿಮೆಂಟರಿ ಎಜುಕೇಷನ್‍ ಕೋರ್ಸ್‍ ತೇರ್ಗಡೆ ಅಥವಾ ಅಂತಿಮ ವರ್ಷದಲ್ಲಿ ಓದುತ್ತಿರಬೇಕು.

ಅಥವಾ

ಕನಿಷ್ಠ ಶೇಕಡ 50ರಷ್ಟು ಅಂಕಗಳೊಂದಿಗೆ ದ್ವಿತೀಯ ಪಿಯು ಉತ್ತೀರ್ಣ ಮತ್ತು ನಾಲ್ಕು ವರ್ಷ ಅವಧಿಯ ಬ್ಯಾಚುಲರ್‍ ಆಫ್‍ ಎಲಿಮೆಂಟರಿ ಎಜುಕೇಷನ್‍ (ಬಿ.ಎಲ್‍.ಇಡಿ) ಉತ್ತೀರ್ಣರಾಗಿರಬೇಕು

ಅಥವಾ

ಕನಿಷ್ಠ ಶೇಕಡ 50ರಷ್ಟು ಅಂಕಗಳೊಂದಿಗೆ ದ್ವಿತೀಯ ಪಿಯು ಉತ್ತೀರ್ಣ ಮತ್ತು ಎರಡು ವರ್ಷ ಅವಧಿಯ ಡಿಪ್ಲೊಮಾ ಇನ್‍ ಎಜುಕೇಷನ್‍ (ವಿಶೇಷ ಶಿಕ್ಷಣ)

ಅಥವಾ

ಪದವಿ ಮತ್ತು ಎರಡು ವರ್ಷದ ಡಿಪ್ಲೊಮಾ ಇನ್‍ ಎಜುಕೇಷನ್‍ ಉತ್ತೀರ್ಣ ಅಥವಾ ಡಿ.ಎಡ್‍ನ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರಬೇಕು.

ಪತ್ರಿಕೆ-2: 6ರಿಂದ 8ನೇ ತರಗತಿಗೆ ಶಿಕ್ಷಕರಾಗಲು

ಪದವಿ ಮತ್ತು ಎರಡು ವರ್ಷ ಅವಧಿಯ ಡಿಪ್ಲೊಮಾ ಇನ್‍ ಎಲಿಮೆಂಟರಿ ಎಜುಕೇಷನ್‍/ ಬಿ.ಎಡ್‍. ಅಂತಿಮ ವರ್ಷದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.

ಅಥವಾ

ಕನಿಷ್ಠ ಶೇಕಡಾ 50ರಷ್ಟು ಅಂಕಗಳೊಂದಿಗೆ ಪದವಿ ಮತ್ತು ಒಂದು ವರ್ಷದ ಬಿ.ಎಡ್‍ ಉತ್ತೀರ್ಣರಾಗಿರಬೇಕು ಅಥವಾ ಓದುತ್ತಿರಬೇಕು

ಅಥವಾ

ಕನಿಷ್ಠ ಶೇಕಡಾ 45ರಷ್ಟು ಅಂಕಗಳೊಂದಿಗೆ ಪದವಿ ತೇರ್ಗಡೆ ಮತ್ತುಎನ್‍ಸಿಟಿಇ ನಿಯಮಗಳ ಅನುಸಾರ ಒಂದು ವರ್ಷದ ಅವಧಿಯ ಬಿ.ಇಡಿ ಉತ್ತೀರ್ಣ ಅಥವಾ ಅಧ್ಯಯನ

ಅಥವಾ
ಕನಿಷ್ಠ ಶೇಕಡ 50ರಷ್ಟು ಅಂಕಗಳೊಂದಿಗೆ ದ್ವಿತೀಯ ಪಿಯು ಅಥವಾ ತತ್ಸಮಾನ  ಪರೀಕ್ಷೆ ಉತ್ತೀರ್ಣ ಮತ್ತು ನಾಲ್ಕು ವರ್ಷ ಅವಧಿಯ ಬ್ಯಾಚುಲರ್‍ ಇನ್‍ ಎಲಿಮೆಂಟರಿ ಎಜುಕೇಷನ್‍ (ಬಿ.ಎಲ್‍.ಇಡಿ) ತೇರ್ಗಡೆ

ಅಥವಾ

ಕನಿಷ್ಠ ಶೇಕಡ 50ರಷ್ಟು ಅಂಕಗಳೊಂದಿಗೆ ದ್ವಿತೀಯ ಪಿಯು ಅಥವಾ ತತ್ಸಮಾನ ಮತ್ತು ನಾಲ್ಕು ವರ್ಷ ಅವಧಿಯ ಬಿ.ಎ/ಬಿ.ಎಸ್‍ಸಿ ಬಿ.ಇಡಿ ಅಥವಾ ಬಿ.ಎ.ಇಡಿ/ಬಿ.ಎಸ್‍ಸಿ ಇಡಿ.

ಅಥವಾ

ಕನಿಷ್ಠ ಶೇಕಡಾ 50ರಷ್ಟು ಅಂಕಗಳೊಂದಿಗೆ ಪದವಿ ಮತ್ತು ಒಂದು ವರ್ಷ ಅವಧಿಯ ಬಿ.ಇಡಿ (ವಿಶೇಷ ಶಿಕ್ಷಣ).

ಪರೀಕ್ಷಾ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ಪತ್ರಿಕೆ-1 ಅಥವಾ ಪತ್ರಿಕೆ-2ಕ್ಕೆ 700 ರೂಪಾಯಿ
ಪತ್ರಿಕೆ-1 ಮತ್ತು ಪತ್ರಿಕೆ-2ಕ್ಕೆ 1,200 ರೂಪಾಯಿ.
ಎಸ್‍ಸಿ/ಎಸ್‍ಟಿ/ಅಂಗವಿಕಲ ಅಭ್ಯರ್ಥಿಗಳಿಗೆ: ಪತ್ರಿಕೆ-1 ಅಥವಾ ಪತ್ರಿಕೆ-2ಕ್ಕೆ 350 ರೂಪಾಯಿ
ಪತ್ರಿಕೆ-1 ಮತ್ತು ಪತ್ರಿಕೆ-2 ಎರಡೂ ಪತ್ರಿಕೆಗಳ ಪರೀಕ್ಷೆಗೆ 600 ರೂಪಾಯಿ.

ಆನ್‍ಲೈನ್‍ ಅರ್ಜಿ ಸಲ್ಲಿಸಲು ಆರಂಭ: ಜೂನ್‍ 22, 2018ರಿಂದ ಜುಲೈ 19, 2018.
ಆನ್‍ಲೈನ್‍ ಅರ್ಜಿ ಸಲ್ಲಿಸಲು ಕೊನೆ ದಿನ: ಜುಲೈ 19, 2017.
ಶುಲ್ಕ ಪಾವತಿಗೆ ಕೊನೆ ದಿನ: ಜುಲೈ 21, 2018.

ಹೆಚ್ಚಿನ ಮಾಹಿತಿಗೆ www.ctet.nic.in ಗೆ ಭೇಟಿ ಕೊಡಿ.






Tuesday, June 12, 2018

ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಬಗ್ಗೆ ನಿಮಗೆಷ್ಟು ಗೊತ್ತು?


ಈಚೆಗೆ ವಿಶ್ವದ ಕೆಲ ರಾಷ್ಟ್ರಗಳ ನಾಯಕರು ಭಾಗವಹಿಸಿದ್ದ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಶೃಂಗ ಸಭೆ ಬಗ್ಗೆ ನೀವೆಲ್ಲ ಓದಿರುತ್ತೀರಿ. ಭಾರತವೂ ಎಸ್‍ಸಿಒದ ಸದಸ್ಯ ರಾಷ್ಟ್ರ ಎಂಬ ಕಾರಣಕ್ಕೆ ಅದಕ್ಕೆ ನಾವು ಅಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೆ. ಎಸ್‍ಸಿಒದ ಸ್ಥಾಪನೆ, ಸದಸ್ಯ ರಾಷ್ಟ್ರಗಳು, ಉದ್ದೇಶ ಮುಂತಾದವುಗಳ ಬಗ್ಗೆ ಇಲ್ಲಿಷ್ಟು ಮಾಹಿತಿ ಇದೆ.

ರಚನೆ: ಜೂನ್‍ 15, 2001

ಇದಕ್ಕೂ ಮೊದಲು ಐದು ರಾಷ್ಟ್ರಗಳನ್ನು ಒಳಗೊಂಡ “ಶಾಂಘೈ ಫೈವ್‍” ಎಂಬ ಸಂಘಟನೆ ಇತ್ತು. ಅದು ಏಪ್ರಿಲ್‍ 26, 1996ರಂದು ಸ್ಥಾಪನೆಯಾಗಿತ್ತು. ಈಗ ನಡೆಯುತ್ತಿರುವುದು ಎಸ್‍ಸಿಒದ 18ನೇ ಶೃಂಗ ಸಭೆ.

ಕೇಂದ್ರ ಕಚೇರಿ: ಚೀನಾದ ಬೀಜಿಂಗ್‍.

ಪ್ರಧಾನ ಕಾರ್ಯದರ್ಶಿ: ರಶೀದ್ ಅಲಿಮೊವ್‍

* 2001ರಲ್ಲಿ ಎಸ್‍ಸಿಒ ರಚನೆಯಾದಾಗ ಅದರಲ್ಲಿದ್ದ ರಾಷ್ಟ್ರಗಳು: ಚೀನಾ, ಕಜಕ್‍ಸ್ತಾನ, ಕಿರ್ಜಗಿಸ್ತಾನ, ರಷ್ಯಾ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ.
* ಏಷ್ಯಾ ಖಂಡದಲ್ಲಿ ಎಸ್‍ಸಿಒದ ಪ್ರಾಮುಖ್ಯತೆ ಹೆಚ್ಚುತ್ತಿರುವುದರಿಂದ ಅದನ್ನು “ಏಷ್ಯಾ ಒಕ್ಕೂಟ” ಎಂದೂ ಕರೆಯುತ್ತಾರೆ.
* ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆ ಆಧಾರದಲ್ಲಿ ಎಸ್‍ಸಿಒ ಬೃಹತ್‍ ಒಕ್ಕೂಟ. ಇದು ಯುರೇಷ್ಯಾ ಭಾಗದ 3/5ರಷ್ಟನ್ನು ಮತ್ತು ವಿಶ್ವ ಜನಸಂಖ್ಯೆಯ ಅರ್ಧದಷ್ಟನ್ನು ಇದು ಒಳಗೊಂಡಿದೆ.
* 2005ರ ಜುಲೈನಲ್ಲಿ ಕಝಕ್‍ಸ್ತಾನದ ಅಸ್ತಾನದಲ್ಲಿ ನಡೆದ ಎಸ್‍ಸಿಒ ಶೃಂಗ ಸಭೆಯಲ್ಲಿ ಭಾರತ, ಇರಾನ್‍, ಮಂಗೋಲಿಯಾ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಮೊದಲ ಬಾರಿಗೆ ಭಾಗವಹಿಸಿದ್ದರು.

ಸದಸ್ಯತ್ವ

1.     1996ರ ಏಪ್ರಿಲ್‍ 26ರಂದು ಚೀನಾ, ಕಜಕ್‍ಸ್ತಾನ, ಕಿರ್ಜಗಿಸ್ತಾನ, ರಷ್ಯಾ ಮತ್ತು ತಜಕಿಸ್ತಾನಗಳಿಂದ ರಚನೆ.
2.     2001ರ ಜೂನ್‍ 15ರಂದು ಉಜ್ಬೇಕಿಸ್ತಾನ  ಸೇರ್ಪಡೆ.
3.     2017ರ ಜೂನ್‍ 9ರಂದು ಭಾರತ ಮತ್ತು ಪಾಕಿಸ್ತಾನ ಸೇರ್ಪಡೆ.

ಎಸ್‍ಸಿಒದ ವೀಕ್ಷಕ ರಾಷ್ಟ್ರಗಳು

ಅಫ್ಗಾನಿಸ್ತಾನ, ಬೆಲಾರಸ್‍, ಇರಾನ್‍ ಮತ್ತು ಮಂಗೋಲಿಯಾ.

ಮಾತುಕತೆ, ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿರುವ ರಾಷ್ಟ್ರಗಳು

ಅರ್ಮೇನಿಯಾ, ಅಜರ್‍ಬೈಜನ್‍, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ ಮತ್ತು ಟರ್ಕಿ.

ಅತಿಥಿಯಾಗಿ ಭಾಗವಹಿಸುವಿಕೆ

ಆಸಿಯಾನ್‍ (ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟ), ಸಿಐಎಸ್‍, ತುರ್ಕ್‍ಮೇನಿಸ್ತಾನ, ವಿಶ್ವಸಂಸ್ಥೆ.

ಚಟುವಟಿಕೆಗಳು

* ಸದಸ್ಯ ರಾಷ್ಟ್ರಗಳ ನಡುವೆ ಭದ್ರತಾ ಸಹಕಾರ
* ಮಿಲಿಟರಿ ಚಟುವಟಿಕೆಗಳು
* ಆರ್ಥಿಕ ಸಹಕಾರ
* ಸಾಂಸ್ಕೃತಿಕ ಸಹಕಾರ
* ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ,, ಆರೋಗ್ಯ, ಪರಿಸರ ರಕ್ಷಣೆ, ಪ್ರವಾಸೋದ್ಯಮ, ಮಾಧ್ಯಮ, ಕ್ರೀಡೆ ಸೇರಿದಂತೆ ಮುಂತಾದ ವಲಯಗಳಲ್ಲಿ ಪರಸ್ಪರ ಸಹಕಾರ.


1.     ಎಸ್‍ಸಿಒ ಚೊಚ್ಚಲ ಶೃಂಗ ಸಭೆ: ಜೂನ್‍ 14, 2001, ಚೀನಾದ ಶಾಂಘೈನಲ್ಲಿ.
2.     ಹಿಂದಿನ ಶೃಂಗಸಭೆ ನಡೆದದ್ದು: ಕಜಕ್‍ಸ್ತಾನದ ಅಸ್ತಾನದಲ್ಲಿ, ಜೂನ್‍ 8, 9ರಂದು.
3.     2018ರ (ಒಟ್ಟಾರೆ 18ನೇ) ಶೃಂಗ ಸಭೆ: ಜೂನ್‍ 9-10ರವರೆಗೆ, ಚೀನಾದ ಕಿಂಗ್‍ಡಾವೊದಲ್ಲಿ ನಡೆಯಿತು.

Monday, June 11, 2018

ಪೊಲೀಸ್‍ ಇಲಾಖೆಯಲ್ಲಿ 2113 ಕಾನ್‍ಸ್ಟೆಬಲ್‍ ಹುದ್ದೆಗಳ ನೇಮಕಾತಿ


 ಕರ್ನಾಟಕ ರಾಜ್ಯ ಪೊಲೀಸ್‍ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‍ಸ್ಟೆಬಲ್‍ (ನಾಗರಿಕ) (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ
1    ಪೊಲೀಸ್‍ ಕಾನ್‍ಸ್ಟೆಬಲ್‍ (ನಾಗರಿಕ) (ಪುರುಷ): 1690 ಹುದ್ದೆಗಳು
2    ಪೊಲೀಸ್‍ ಕಾನ್‍ಸ್ಟೆಬಲ್‍ (ನಾಗರಿಕ) (ಮಹಿಳಾ): 423 ಹುದ್ದೆಗಳು

ಒಟ್ಟು ಹುದ್ದೆಗಳು: 2113


ವಿದ್ಯಾರ್ಹತೆ: ಪಿಯುಸಿ ಅಥವಾ ತತ್ಸಮಾನ

ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 19-25, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 19-27 ಮತ್ತು ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 19-30 ವರ್ಷ.

ಶುಲ್ಕ
ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂಪಾಯಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 100 ರೂಪಾಯಿ

ಅರ್ಜಿ ಸಲ್ಲಿಸುವ ಅವಧಿ: ಜೂನ್‍ 11, 2018ರಿಂದ ಜೂನ್‍ 30, 2018ರವರೆಗೆ.
ಶುಲ್ಕ ಪಾವತಿಗೆ ಕೊನೆ ದಿನ: ಜುಲೈ 3, 2018.

ಹೆಚ್ಚಿನ ಮಾಹಿತಿಗೆ www.ksp.gov.inಗೆ ಭೇಟಿ ಕೊಡಿ.




Friday, June 8, 2018

ಕೈಗಾರಿಕಾ ಭದ್ರತಾ ದಳದಲ್ಲಿ ಕಾನ್‍ಸ್ಟೆಬಲ್‍ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ


ರಾಜ್ಯದ ಪೊಲೀಸ್‍ ಇಲಾಖೆಯಲ್ಲಿನ ಕರ್ನಾಟಕ ಕೈಗಾರಿಕಾ ಭದ್ರತಾ ದಳ (ಕೆಎಸ್‍ಐಎಸ್‍ಎಫ್‍), ಕಾನ್‍ಸ್ಟೆಬಲ್‍ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ ಮತ್ತು ವರ್ಗೀಕರಣ

1.    ಪೊಲೀಸ್‍ ಕಾನ್‍ಸ್ಟೆಬಲ್‍ (ಪುರುಷ)

ಸಾಮಾನ್ಯ – 177, ಪರಿಶಿಷ್ಟ ಜಾತಿ – 53, ಪರಿಶಿಷ್ಟ ಪಂಗಡ – 10, ಪ್ರವರ್ಗ -1 – 14, ಪ್ರವರ್ಗ – 2ಎ – 54, ಪ್ರವರ್ಗ – 2ಬಿ – 15, ಪ್ರವರ್ಗ 3ಎ – 14, ಪ್ರವರ್ಗ – 3ಬಿ – 18

ಒಟ್ಟು ಹುದ್ದೆಗಳು: 355

2.    ಪೊಲೀಸ್‍ ಕಾನ್‍ಸ್ಟೆಬಲ್‍ (ಮಹಿಳೆ)

ಸಾಮಾನ್ಯ – 20, ಪರಿಶಿಷ್ಟ ಜಾತಿ – 06, ಪರಿಶಿಷ್ಟ ಪಂಗಡ – 01, ಪ್ರವರ್ಗ1 – 01, ಪ್ರವರ್ಗ 2ಎ – 07, ಪ್ರವರ್ಗ 2ಬಿ – 01, ಪ್ರವರ್ಗ 3ಎ – 02, ಪ್ರವರ್ಗ 3ಬಿ – 02

ಒಟ್ಟು ಹುದ್ದೆಗಳು: 40

ವಯೋಮಿತಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 18 – 27
ಇತರ ಅಭ್ಯರ್ಥಿಗಳಿಗೆ 18 – 25 ವರ್ಷ

ವಿದ್ಯಾರ್ಹತೆ: ಎಸ್‍ಎಸ್‍ಎಲ್‍ಸಿ / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಈ ಹುದ್ದೆಗಳಿಗೆ ನೇಮಕವಾದವರಿಗೆ ಎರಡೂವರೆ ವರ್ಷದ ಪ್ರೊಬೆಷನರಿ ಅವಧಿ ಇರುತ್ತದೆ.

ನೇಮಕಾತಿ ವಿಧಾನ: ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ.

ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂಪಾಯಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 100 ರೂಪಾಯಿ.

ಅರ್ಜಿ ಸಲ್ಲಿಸಲು ಕೊನೆ ದಿನ: ಜೂನ್‍ 25, 2018

ಶುಲ್ಕ ಪಾವತಿಗೆ ಕೊನೆ ದಿನ: ಜೂನ್‍ 28, 2018

ಹೆಚ್ಚಿನ ಮಾಹಿತಿಗೆ: www.ksp.gov.inಗೆ ಭೇಟಿ ಕೊಡಿ.


Monday, March 12, 2018

ಕರ್ನಾಟಕ ಬ್ಯಾಂಕ್‌ನಿಂದ ಪ್ರೊಬೆಷನರಿ ಆಫೀಸರ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ


ಖಾಸಗಿ ರಂಗದ ಪ್ರಮುಖ ಬ್ಯಾಂಕ್‌ ಆದ ಕರ್ನಾಟಕ ಬ್ಯಾಂಕ್‌, ಪ್ರೊಬೇಷನರಿ ಆಫಿಸರ್ಸ್‌ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ
1.  ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್ಸ್ :
   ವಿದ್ಯಾರ್ಹತೆ: ಯು.ಜಿ.ಸಿ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ಪದವಿ / ತೋಟಗಾರಿಗಾ ವಿಜ್ಞಾನ ಪದವಿ ಅಥವಾ ಆಗ್ರಿಕಲ್ಚರಲ್ ಮಾರ್ಕೆಟಿಂಗ್ ಪದವಿಯನ್ನು ಹೊಂದಿರಬೇಕು.
2.  ಚಾಟರ್ಡ್ ಅಕೌಂಟಂಟ್
   ವಿದ್ಯಾರ್ಹತೆ: ಯು.ಜಿ.ಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು (ಸಿ.ಎ.) ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
3.  ಲಾ ಆಫೀಸರ್ಸ್
   ವಿದ್ಯಾರ್ಹತೆ: ಯು.ಜಿ.ಸಿ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ  ಲಾ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ 3 ವರ್ಷಗಳ ಲಾ ಪ್ರ್ಯಾಕ್ಟೀಸ್ ಅನುಭವ ಹೊಂದಿರಬೇಕು.
4.  ರಿಲೇಶನ್‍ಶಿಪ್ ಮ್ಯಾನೇಜರ್ಸ್
   ವಿದ್ಯಾರ್ಹತೆ: ಯು.ಜಿ.ಸಿ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ  ಎಂ.ಬಿ.ಎ. ಮಾರ್ಕೆಟಿಂಗ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
 ವಯೋಮಿತಿ : 28 ವರ್ಷ. ಎಸ್.ಸಿ. / ಎಸ್.ಟಿ. ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಸಲ್ಲಿಸಲು ವಿವರ: ಬ್ಯಾಂಕಿನ ವೆಬ್‍ಸೈಟ್‍ನಿಂದ (www.karnatakabank.com) ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು, ಸ್ವಲಿಖಿತ ಅಥವಾ ಮುದ್ರಿತ ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸುವುದು.
   The Deputy General Manager (HR & IR),
        Karnataka Bank Limited, Head Office,
        Mahaveera Circle,
        Kankanady,
        Mangaluru-575002
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಮಾರ್ಚ್‌ 2018 
ಆಯ್ದ ಅಭ್ಯರ್ಥಿಗಳಿಗೆ ಬೆಂಗಳೂರು ಅಥವಾ ಮಂಗಳೂರಿನಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಸಲು www.karnatakabank.com ಸಂಪರ್ಕಿಸಿ.

Thursday, March 8, 2018

ಎಸ್.ಎಸ್.ಸಿ.ಯಿಂದ 1330 ಎಸ್.ಐ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ




ಸಿಬ್ಬಂದಿ ನೇಮಕಾತಿ ಆಯೋಗವು (SSC) ಸಬ್‍ಇನ್‍ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ:
1.      ಸಬ್‍ಇನ್‍ಸ್ಪೆಕ್ಟರ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ)
       ಹುದ್ದೆಗಳ ವಿವರ : ಮಹಿಳೆ-38, ಪುರುಷ-1035. ಮಾಜಿ ಸೈನಿಕ-107
       ಒಟ್ಟು ಹುದ್ದೆಗಳು: 1180
       ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ / ಪಿ.ಜಿ.ಡಿಪ್ಲೊಮಾ
       ವಯೋಮಿತಿ: 20 - 25 ವರ್ಷ (ಅಭ್ಯರ್ಥಿಯು 2 ಆಗಸ್ಟ್ಟ್ 1993 ರಿಂದ 1 ಆಗಸ್ಟ್ಟ್ 1998ರ ಒಳಗೆ ಜನಿಸಿರಬೇಕು)
2.     ಸಬ್‍ಇನ್‍ಸ್ಪೆಕ್ಟರ್ (ದೆಹಲಿ ಪೊಲೀಸ್ ಇಲಾಖೆ)
       ಹುದ್ದೆಗಳ ವಿವರ : ಮಹಿಳೆ-53, ಪುರುಷ-86, ಮಾಜಿ ಸೈನಿಕ-11
       ಒಟ್ಟು ಹುದ್ದೆ : 150
       ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ / ಪಿ.ಜಿ.ಡಿಪ್ಲೋಮಾ
       ವಯೋಮಿತಿ: 20 - 25 ವರ್ಷ (ಅಭ್ಯರ್ಥಿಯು 2 ಆಗಸ್ಟ್ಟ್ 1993 ರಿಂದ 1 ಆಗಸ್ಟ್ಟ್ 1998ರ ಒಳಗೆ ಜನಿಸಿರಬೇಕು)
3.     ಅಸಿಸ್ಟೆಂಟ್ ಸಬ್‍ಇನ್‍ಸ್ಪೆಕ್ಟರ್ (ಸಿ.ಐ.ಎಸ್.ಎಫ್)
       ಖಾಲಿ ಹುದ್ದೆಗಳು:  (Not yet declared)
       ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ / ಪಿ.ಜಿ.ಡಿಪ್ಲೋಮಾ
       ವಯೋಮಿತಿ: 20 - 25 ವರ್ಷ (ಅಭ್ಯರ್ಥಿಯು 2 ಆಗಸ್ಟ್ಟ್ 1993 ರಿಂದ 1 ಆಗಸ್ಟ್ಟ್ 1998ರ ಒಳಗೆ ಜನಿಸಿರಬೇಕು)

ಪರೀಕ್ಷೆಯ ವಿವರ
ಪರೀಕ್ಷೆಗಳು ಅನ್‍ಲೈನ್ ಮೂಲಕ ಎರಡು ಹಂತಗಳಲ್ಲಿ ನಡೆಯುತ್ತವೆ.
ಹಂತ 1 (ಪೇಪರ್-1): 4 ಜೂನ್ 2018 ರಿಂದ 10 ಜೂನ್ 2018 ರ ವರೆಗೆ ಆಯ್ದ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತವೆ.
ಪಠ್ಯಕ್ರಮ:
       1.            General Intelligence & Reasoning
              2.            General Knowledge & General Awareness
              3.            Quantitative Aptitude
              4.            English - Comprehension

ಹಂತ 1 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಹದಾಢ್ರ್ಯ ಪರೀಕ್ಷೆ (Physical Entrance Test) ಮತ್ತು (Physical Standard Test) ಗಳನ್ನು ನಡೆಸಲಾಗುವುದು.
ದೇಹದಾಢ್ರ್ಯ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಎರಡನೇ ಹಂತದ ಪರೀಕ್ಷೆಗೆ ಅರ್ಹರಾಗುತ್ತಾರೆ.

ಹಂತ 2 (ಪೇಪರ್ -2):  ಡಿಸೆಂಬರ್ 1, 2018
ಪಠ್ಯಕ್ರಮ:  English language & Comprehension

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು : ಬೆಂಗಳೂರು (9001), ಮೈಸೂರು (9009), ಮಂಗಳೂರು (9008), ಧಾರವಾಡ (9004), ಗುಲ್ಬರ್ಗ (9005)

ಅರ್ಜಿ ಶುಲ್ಕ : 100 ರೂ. ಎಸ್‍ಸಿ/ಎಸ್‍ಟಿ, ಒಬಿಸಿ ಅಭ್ಯರ್ಥಿಗಳಿವೆ ಶುಲ್ಕ ವಿನಾಯಿತಿ ಇದೆ.  ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದ ಚಲನ್ ಮೂಲಕ, ಎಸ್‍ಬಿಐ ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ/ಡೆಬಿಟ್ ಕಾರ್ಡ್ ಮತ್ತು ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 2, ಏಪ್ರಿಲ್ 2018

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಸಲು  http://www.ssconline.nic.in/  ಸಂಪರ್ಕಿಸಿ.

ಬ್ಯಾಂಕ್‍ ಆಫ್‍ ಬರೋಡದಲ್ಲಿ 600 ಪ್ರೊಬೇಷನರಿ ಆಫೀಸರ್‍ ಹುದ್ದೆಗಳು

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ ಆಫ್‍ ಬರೋಡ, ಬರೋಡ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ನಡೆಸುವ ಪೋಸ್ಟ್‍ ಗ್ರ್ಯಾಜುಯೇಟ್‍ ಸರ್ಟಿಫಿಕೇಟ್‍ ಇನ್‍ ಬ್ಯಾಂಕಿಂಗ್ ಅಂಡ್ ...