Tuesday, June 12, 2018

ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಬಗ್ಗೆ ನಿಮಗೆಷ್ಟು ಗೊತ್ತು?


ಈಚೆಗೆ ವಿಶ್ವದ ಕೆಲ ರಾಷ್ಟ್ರಗಳ ನಾಯಕರು ಭಾಗವಹಿಸಿದ್ದ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಶೃಂಗ ಸಭೆ ಬಗ್ಗೆ ನೀವೆಲ್ಲ ಓದಿರುತ್ತೀರಿ. ಭಾರತವೂ ಎಸ್‍ಸಿಒದ ಸದಸ್ಯ ರಾಷ್ಟ್ರ ಎಂಬ ಕಾರಣಕ್ಕೆ ಅದಕ್ಕೆ ನಾವು ಅಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೆ. ಎಸ್‍ಸಿಒದ ಸ್ಥಾಪನೆ, ಸದಸ್ಯ ರಾಷ್ಟ್ರಗಳು, ಉದ್ದೇಶ ಮುಂತಾದವುಗಳ ಬಗ್ಗೆ ಇಲ್ಲಿಷ್ಟು ಮಾಹಿತಿ ಇದೆ.

ರಚನೆ: ಜೂನ್‍ 15, 2001

ಇದಕ್ಕೂ ಮೊದಲು ಐದು ರಾಷ್ಟ್ರಗಳನ್ನು ಒಳಗೊಂಡ “ಶಾಂಘೈ ಫೈವ್‍” ಎಂಬ ಸಂಘಟನೆ ಇತ್ತು. ಅದು ಏಪ್ರಿಲ್‍ 26, 1996ರಂದು ಸ್ಥಾಪನೆಯಾಗಿತ್ತು. ಈಗ ನಡೆಯುತ್ತಿರುವುದು ಎಸ್‍ಸಿಒದ 18ನೇ ಶೃಂಗ ಸಭೆ.

ಕೇಂದ್ರ ಕಚೇರಿ: ಚೀನಾದ ಬೀಜಿಂಗ್‍.

ಪ್ರಧಾನ ಕಾರ್ಯದರ್ಶಿ: ರಶೀದ್ ಅಲಿಮೊವ್‍

* 2001ರಲ್ಲಿ ಎಸ್‍ಸಿಒ ರಚನೆಯಾದಾಗ ಅದರಲ್ಲಿದ್ದ ರಾಷ್ಟ್ರಗಳು: ಚೀನಾ, ಕಜಕ್‍ಸ್ತಾನ, ಕಿರ್ಜಗಿಸ್ತಾನ, ರಷ್ಯಾ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ.
* ಏಷ್ಯಾ ಖಂಡದಲ್ಲಿ ಎಸ್‍ಸಿಒದ ಪ್ರಾಮುಖ್ಯತೆ ಹೆಚ್ಚುತ್ತಿರುವುದರಿಂದ ಅದನ್ನು “ಏಷ್ಯಾ ಒಕ್ಕೂಟ” ಎಂದೂ ಕರೆಯುತ್ತಾರೆ.
* ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆ ಆಧಾರದಲ್ಲಿ ಎಸ್‍ಸಿಒ ಬೃಹತ್‍ ಒಕ್ಕೂಟ. ಇದು ಯುರೇಷ್ಯಾ ಭಾಗದ 3/5ರಷ್ಟನ್ನು ಮತ್ತು ವಿಶ್ವ ಜನಸಂಖ್ಯೆಯ ಅರ್ಧದಷ್ಟನ್ನು ಇದು ಒಳಗೊಂಡಿದೆ.
* 2005ರ ಜುಲೈನಲ್ಲಿ ಕಝಕ್‍ಸ್ತಾನದ ಅಸ್ತಾನದಲ್ಲಿ ನಡೆದ ಎಸ್‍ಸಿಒ ಶೃಂಗ ಸಭೆಯಲ್ಲಿ ಭಾರತ, ಇರಾನ್‍, ಮಂಗೋಲಿಯಾ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಮೊದಲ ಬಾರಿಗೆ ಭಾಗವಹಿಸಿದ್ದರು.

ಸದಸ್ಯತ್ವ

1.     1996ರ ಏಪ್ರಿಲ್‍ 26ರಂದು ಚೀನಾ, ಕಜಕ್‍ಸ್ತಾನ, ಕಿರ್ಜಗಿಸ್ತಾನ, ರಷ್ಯಾ ಮತ್ತು ತಜಕಿಸ್ತಾನಗಳಿಂದ ರಚನೆ.
2.     2001ರ ಜೂನ್‍ 15ರಂದು ಉಜ್ಬೇಕಿಸ್ತಾನ  ಸೇರ್ಪಡೆ.
3.     2017ರ ಜೂನ್‍ 9ರಂದು ಭಾರತ ಮತ್ತು ಪಾಕಿಸ್ತಾನ ಸೇರ್ಪಡೆ.

ಎಸ್‍ಸಿಒದ ವೀಕ್ಷಕ ರಾಷ್ಟ್ರಗಳು

ಅಫ್ಗಾನಿಸ್ತಾನ, ಬೆಲಾರಸ್‍, ಇರಾನ್‍ ಮತ್ತು ಮಂಗೋಲಿಯಾ.

ಮಾತುಕತೆ, ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿರುವ ರಾಷ್ಟ್ರಗಳು

ಅರ್ಮೇನಿಯಾ, ಅಜರ್‍ಬೈಜನ್‍, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ ಮತ್ತು ಟರ್ಕಿ.

ಅತಿಥಿಯಾಗಿ ಭಾಗವಹಿಸುವಿಕೆ

ಆಸಿಯಾನ್‍ (ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟ), ಸಿಐಎಸ್‍, ತುರ್ಕ್‍ಮೇನಿಸ್ತಾನ, ವಿಶ್ವಸಂಸ್ಥೆ.

ಚಟುವಟಿಕೆಗಳು

* ಸದಸ್ಯ ರಾಷ್ಟ್ರಗಳ ನಡುವೆ ಭದ್ರತಾ ಸಹಕಾರ
* ಮಿಲಿಟರಿ ಚಟುವಟಿಕೆಗಳು
* ಆರ್ಥಿಕ ಸಹಕಾರ
* ಸಾಂಸ್ಕೃತಿಕ ಸಹಕಾರ
* ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ,, ಆರೋಗ್ಯ, ಪರಿಸರ ರಕ್ಷಣೆ, ಪ್ರವಾಸೋದ್ಯಮ, ಮಾಧ್ಯಮ, ಕ್ರೀಡೆ ಸೇರಿದಂತೆ ಮುಂತಾದ ವಲಯಗಳಲ್ಲಿ ಪರಸ್ಪರ ಸಹಕಾರ.


1.     ಎಸ್‍ಸಿಒ ಚೊಚ್ಚಲ ಶೃಂಗ ಸಭೆ: ಜೂನ್‍ 14, 2001, ಚೀನಾದ ಶಾಂಘೈನಲ್ಲಿ.
2.     ಹಿಂದಿನ ಶೃಂಗಸಭೆ ನಡೆದದ್ದು: ಕಜಕ್‍ಸ್ತಾನದ ಅಸ್ತಾನದಲ್ಲಿ, ಜೂನ್‍ 8, 9ರಂದು.
3.     2018ರ (ಒಟ್ಟಾರೆ 18ನೇ) ಶೃಂಗ ಸಭೆ: ಜೂನ್‍ 9-10ರವರೆಗೆ, ಚೀನಾದ ಕಿಂಗ್‍ಡಾವೊದಲ್ಲಿ ನಡೆಯಿತು.

No comments:

ಬ್ಯಾಂಕ್‍ ಆಫ್‍ ಬರೋಡದಲ್ಲಿ 600 ಪ್ರೊಬೇಷನರಿ ಆಫೀಸರ್‍ ಹುದ್ದೆಗಳು

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ ಆಫ್‍ ಬರೋಡ, ಬರೋಡ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ನಡೆಸುವ ಪೋಸ್ಟ್‍ ಗ್ರ್ಯಾಜುಯೇಟ್‍ ಸರ್ಟಿಫಿಕೇಟ್‍ ಇನ್‍ ಬ್ಯಾಂಕಿಂಗ್ ಅಂಡ್ ...