Friday, June 8, 2018

ಕೈಗಾರಿಕಾ ಭದ್ರತಾ ದಳದಲ್ಲಿ ಕಾನ್‍ಸ್ಟೆಬಲ್‍ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ


ರಾಜ್ಯದ ಪೊಲೀಸ್‍ ಇಲಾಖೆಯಲ್ಲಿನ ಕರ್ನಾಟಕ ಕೈಗಾರಿಕಾ ಭದ್ರತಾ ದಳ (ಕೆಎಸ್‍ಐಎಸ್‍ಎಫ್‍), ಕಾನ್‍ಸ್ಟೆಬಲ್‍ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ ಮತ್ತು ವರ್ಗೀಕರಣ

1.    ಪೊಲೀಸ್‍ ಕಾನ್‍ಸ್ಟೆಬಲ್‍ (ಪುರುಷ)

ಸಾಮಾನ್ಯ – 177, ಪರಿಶಿಷ್ಟ ಜಾತಿ – 53, ಪರಿಶಿಷ್ಟ ಪಂಗಡ – 10, ಪ್ರವರ್ಗ -1 – 14, ಪ್ರವರ್ಗ – 2ಎ – 54, ಪ್ರವರ್ಗ – 2ಬಿ – 15, ಪ್ರವರ್ಗ 3ಎ – 14, ಪ್ರವರ್ಗ – 3ಬಿ – 18

ಒಟ್ಟು ಹುದ್ದೆಗಳು: 355

2.    ಪೊಲೀಸ್‍ ಕಾನ್‍ಸ್ಟೆಬಲ್‍ (ಮಹಿಳೆ)

ಸಾಮಾನ್ಯ – 20, ಪರಿಶಿಷ್ಟ ಜಾತಿ – 06, ಪರಿಶಿಷ್ಟ ಪಂಗಡ – 01, ಪ್ರವರ್ಗ1 – 01, ಪ್ರವರ್ಗ 2ಎ – 07, ಪ್ರವರ್ಗ 2ಬಿ – 01, ಪ್ರವರ್ಗ 3ಎ – 02, ಪ್ರವರ್ಗ 3ಬಿ – 02

ಒಟ್ಟು ಹುದ್ದೆಗಳು: 40

ವಯೋಮಿತಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 18 – 27
ಇತರ ಅಭ್ಯರ್ಥಿಗಳಿಗೆ 18 – 25 ವರ್ಷ

ವಿದ್ಯಾರ್ಹತೆ: ಎಸ್‍ಎಸ್‍ಎಲ್‍ಸಿ / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಈ ಹುದ್ದೆಗಳಿಗೆ ನೇಮಕವಾದವರಿಗೆ ಎರಡೂವರೆ ವರ್ಷದ ಪ್ರೊಬೆಷನರಿ ಅವಧಿ ಇರುತ್ತದೆ.

ನೇಮಕಾತಿ ವಿಧಾನ: ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ.

ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂಪಾಯಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 100 ರೂಪಾಯಿ.

ಅರ್ಜಿ ಸಲ್ಲಿಸಲು ಕೊನೆ ದಿನ: ಜೂನ್‍ 25, 2018

ಶುಲ್ಕ ಪಾವತಿಗೆ ಕೊನೆ ದಿನ: ಜೂನ್‍ 28, 2018

ಹೆಚ್ಚಿನ ಮಾಹಿತಿಗೆ: www.ksp.gov.inಗೆ ಭೇಟಿ ಕೊಡಿ.


No comments:

ಬ್ಯಾಂಕ್‍ ಆಫ್‍ ಬರೋಡದಲ್ಲಿ 600 ಪ್ರೊಬೇಷನರಿ ಆಫೀಸರ್‍ ಹುದ್ದೆಗಳು

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ ಆಫ್‍ ಬರೋಡ, ಬರೋಡ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ನಡೆಸುವ ಪೋಸ್ಟ್‍ ಗ್ರ್ಯಾಜುಯೇಟ್‍ ಸರ್ಟಿಫಿಕೇಟ್‍ ಇನ್‍ ಬ್ಯಾಂಕಿಂಗ್ ಅಂಡ್ ...