Saturday, February 17, 2018

ಪಿಎಸ್‍ಐ ನೇಮಕಾತಿಗೆ ಅರ್ಜಿ ಆಹ್ವಾನ


ರಾಜ್ಯ ಪೊಲೀಸ್ ಇಲಾಖೆಯು ಖಾಲಿ ಇರುವ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ

1. ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಸಿವಿಲ್) ಪುರುಷ - 110
2. ಮಹಿಳಾ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಸಿವಿಲ್) - 36
3. ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಸಿವಿಲ್) ಸೇವೆಯಲ್ಲಿ ಇರುವವರಿಗೆ - 15
4. ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಸಿವಿಲ್)(ಹೈದರಾಬಾದ್-ಕರ್ನಾಟಕ) ಪುರುಷ - 02
5. ಮಹಿಳಾ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಹೈದರಾಬಾದ್-ಕರ್ನಾಟಕ)(ಸಿವಿಲ್)-01
ಒಟ್ಟು ಹುದ್ದೆಗಳು: 164

ವಯೋಮಿತಿ: ಕನಿಷ್ಠ 21 ವರ್ಷ. ಎಸ್‍ಸಿ, ಎಸ್‍ಟಿ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ. ಇತರ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ.
ಸೇವಾನಿರತ ಎಸ್‍ಸಿ, ಎಸ್‍ಟಿ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಸೇವಾನಿರತ ಇತರ ಅಭ್ಯರ್ಥಿಗಳಿಗೆ 35 ವರ್ಷ.

ವಿದ್ಯಾರ್ಹತೆ
ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ನೇಮಕಾತಿ ವಿಧಾನ
ದೇಹದಾಢ್ರ್ಯ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ.

ಅರ್ಜಿ ಶುಲ್ಕ
ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂಪಾಯಿ
ಎಸ್‍ಸಿ, ಎಸ್‍ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 100 ರೂಪಾಯಿ.

ಅರ್ಜಿ ಸಲ್ಲಿಸಲು ಆರಂಭ: ಫೆಬ್ರುವರಿ 15, 2018
ಕೊನೆ ದಿನ: ಮಾರ್ಚ್ 12, 2018
ಹೆಚ್ಚಿನ ಮಾಹಿತಿಗೆ www.ksp.gov.inಗೆ  ಭೇಟಿ ಕೊಡಿ.

1 comment:

camilacabanas said...

Mummys Gold Casino - JtmHub
Mummys Gold Casino: Enjoy 김천 출장안마 the 양산 출장샵 best online 제주도 출장안마 casino slots, table games, bingo and online poker available 전주 출장샵 from the comfort of your home. 사천 출장안마

ಬ್ಯಾಂಕ್‍ ಆಫ್‍ ಬರೋಡದಲ್ಲಿ 600 ಪ್ರೊಬೇಷನರಿ ಆಫೀಸರ್‍ ಹುದ್ದೆಗಳು

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ ಆಫ್‍ ಬರೋಡ, ಬರೋಡ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ನಡೆಸುವ ಪೋಸ್ಟ್‍ ಗ್ರ್ಯಾಜುಯೇಟ್‍ ಸರ್ಟಿಫಿಕೇಟ್‍ ಇನ್‍ ಬ್ಯಾಂಕಿಂಗ್ ಅಂಡ್ ...